ನಮ್ಮ ಬಗ್ಗೆ

ಶರಣರ ವೈಚಾರಿಕ ಸಂದೇಶವನ್ನು ಇಂದಿನ ತಲೆಮಾರಿಗೆ ಮುಟ್ಟಿಸುವ ಉದ್ದೇಶದಿಂದ ಸ್ಥಾಪಿಸಿದ ಒಂದು ಸಾಂಸ್ಕೃತಿಕ ಸಂಸ್ಥೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು. ಈ ಪ್ರತಿಷ್ಠಿತ ಪ್ರಶಸ್ತಿಯ ಪ್ರಾಯೋಜಕರು ರಮಣಶ್ರೀ ಪ್ರತಿಷ್ಠಾನ ಸಂಸ್ಥೆಯವರು.

ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದಲ್ಲಿ ಲೋಕಸೋಜಿಗದ ಸಮಾಜೋ-ಧಾರ್ಮಿಕ ಆಂದೋಲನ ನಡೆಸಿದ ಶರಣರ ವೈಚಾರಿಕ ಸಂದೇಶವನ್ನು ಇಂದಿನ ತಲೆಮಾರಿಗೆ ಮುಟ್ಟಿಸುವ ಆಶಯದಿಂದ ಸುತ್ತೂರು ಶ್ರೀ ವೀರ ಸಿಂಹಾಸನ ಮಠದ ಜಗದ್ಗುರು ಪೂಜ್ಯ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಸ್ಥಾಪಿಸಿದ ಒಂದು ಸಾಂಸ್ಕೃತಿಕ ಸಂಸ್ಥೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು.

ಕಳೆದ ಮೂವತ್ತೊಂದು ವರ್ಷಗಳಿಂದ ಶರಣ ಸಾಹಿತ್ಯ ಮತ್ತು ಸಂಸ್ಕೃತಿಗಳ ಪ್ರಸಾರ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಪರಿಷತ್ತು. ದಾನಿಗಳ ನೆರವಿನಿಂದ, ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರನ್ನು ಗುರುತಿಸಿ, ಪ್ರಶಸ್ತಿ ನೀಡಿ ಪುರಸ್ಕರಿಸುತ್ತಿದೆ.

ದಾನಿಗಳಿಂದ ಪ್ರಾಯೋಜಿತವಾಗಿರುವ ಅಂತಹ ಪ್ರತಿಷ್ಠಿತ ಪ್ರಶಸ್ತಿ – ರಮಣಶ್ರೀ ಶರಣ ಪ್ರಶಸ್ತಿ. ಪ್ರತಿ ವರ್ಷ ಜೀವಮಾನ ಸಾಧನೆಯ ಸನ್ಮಾನವೂ ಸೇರಿದಂತೆ ಒಂಬತ್ತು ಜನ ಸಾಧಕರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಪ್ರತಿಷ್ಠಿತ ಪ್ರಶಸ್ತಿಯ ಪ್ರಾಯೋಜಕರು ರಮಣಶ್ರೀ ಪ್ರತಿಷ್ಠಾನ ಸಂಸ್ಥೆಯವರು. ನಾಡಿನ ಉದ್ಯಮ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರಾಗಿರುವ ಈ ಸಂಸ್ಥೆಯ ಕೊಡುಗೆಯಿಂದ ಶರಣ ಸಾಹಿತ್ಯ ಸಂಶೋಧನೆ, ಆಧುನಿಕ ವಚನ ರಚನೆ, ವಚನಸಂಗೀತ ಮತ್ತು ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಹಿರಿಯ ಶ್ರೇಣಿಯ ಮೂವರು ವ್ಯಕ್ತಿಗಳಿಗೆ ಹಾಗೂ ಒಂದು ಸೇವಾ ಸಂಸ್ಥೆಗೆ ತಲಾ 4೦,೦೦೦/- ರೂಗಳನ್ನು, ಅದೇ ರೀತಿ ಉತ್ತೇಜನ ಶ್ರೇಣಿಯ ಶರಣ ಸಾಹಿತ್ಯ ಸಂಶೋಧನೆ, ಆಧುನಿಕ ವಚನ ರಚನೆ, ವಚನ ಸಂಗೀತ ಮತ್ತು ಶರಣ ಸಂಸ್ಕೃತಿ ಸೇವಾ ಸಂಸ್ಥೆಗೆ ತಲಾ 2೦,೦೦೦/- ರೂ ಗಳನ್ನು ನೀಡ್ಲಾಗುತ್ತದೆ. ರಮಣಶ್ರೀ ಶರಣ ಜೀವಮಾನ ಸಾಧಕ ಸನ್ಮಾನಿತರಿಗೆ ರೂ. 5೦,೦೦೦/- ರೂಗಳನ್ನು ಪ್ರಶಸ್ತಿ ಫಲಕದೊಂದಿಗೆ ನೀಡಿ
ಗೌರವಿಸಲಾಗುತ್ತದೆ.

ಕಳೆದ 17 ವರ್ಷಗಳಿಂದ ನಿರಂತರವಾಗಿ ನಡೆದುಬರುತ್ತಿರುವ ಈ ಪ್ರಶಸ್ತಿ ಪ್ರದಾನ ಈ ಸಲ ದಿನಾಂಕ 16.11.2023 ರಂದು ನಡೆಯುತ್ತದೆ. ಇಂತಹ ಮೌಲಿಕ ಪ್ರಶಸ್ತಿಗಳನ್ನು ಪ್ರಾಯೋಜಿಸಿರುವ ರಮಣಶ್ರೀ ಪ್ರತಿಷ್ಠಾನಕ್ಕೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೃತಜ್ಞವಾಗಿದೆ.